Monday, 7 July 2014

Time Heals Everything.. Life Goes On...

ಸ್ನೇಹಿತರೇ, ಯಾರಾದರೂ ನನ್ನನ್ನು ಈ ಪ್ರಪಂಚದಲ್ಲಿ ಅತ್ಯಂತ ಪ್ರಾಮುಖ್ಯವಾದ, ಪ್ರಖರವಾದ, ದುಬಾರಿಯಾದ, 'The Most Powerful Thing' ಅಂತಾರಲ್ಲ ಅದು ಏನು ಅಂತ ಕೇಳಿದ್ರೆ, ನನ್ನ ಉತ್ತರ ಖಡಾಖಂಡಿತವಾಗಿ 'TIME' ಆಗಿರತ್ತೆ.. ನಿಮ್ಮ ಜೀವನದಲ್ಲಿ ಯಾರಾದರೂ ನಿಮಗೆ ಅಂತ ಸ್ವಲ್ಪ ಸಮಯ ಮೀಸಲು ಇಟ್ಟು, ನಿಮ್ಮೊಂದಿಗೆ ಅವರ ಸಮಯವನ್ನು ಹಂಚಿಕೊಂಡರೆ, ಖಂಡಿತ ನೀವು ಅವರನ್ನು ಗೌರವಿಸಲೇಬೇಕು.. ಆ ವ್ಯಕ್ತಿ ತನ್ನ ಜೀವನದ ಒಂದು ಭಾಗವನ್ನೇ ನಿಮ್ಮೊಂದಿಗೆ Share ಮಾಡ್ಕೋತಾ ಇದ್ದಾನಲ್ಲ ಅದಿಕ್ಕೆ..

ಒಂದು ಸಂಭಂಧವನ್ನು ಇನ್ನಸ್ಟು ಹತ್ತಿರವಾಗಿ ಬೆಸೆಯುವ ಮತ್ತು ಇನ್ನಸ್ಟು ದೂರಮಾಡುವ ಶಕ್ತಿ ಇರೋದು ಕೇವಲ TIMEಗೆ, ಮನುಷ್ಯನನ್ನು ಅತ್ಯಂತ ಆನಂದಗೊಳಿಸುವ ಹಾಗೂ ಅತ್ಯಂತ ಖಿನ್ನ ನಾಗಿಸಿ, ಹತಾಶನನ್ನಾಗಿಸುವ ಶಕ್ತಿ ಇರುವುದು ಕೂಡ TIME ಗೆ ಮಾತ್ರ... ಎಲ್ಲರಿಗೂ ತಿಳಿದಿರುವ ಹಾಗೆ, ಕಳೆದು ಹೋದ ಸಮಯವನ್ನು ಮರಳಿ ಪಡೆಯಲು ಸಾಧ್ಯ ಇಲ್ಲ ಅಲ್ವಾ, TIME ಅನ್ನೋದು ಅಸ್ಟು ದುಬಾರಿ, ಅದಿಕ್ಕೆ ಈ ಪ್ರಪಂಚದಲ್ಲಿ ಅಸಾಧ್ಯವಾದದ್ದನ್ನು ಸಾಧಿಸುವ ಶಕ್ತಿ ಇರುವುದು ಕೂಡ ಅದೇ, TIME ಗೆ ಮಾತ್ರ...

ಮನುಷ್ಯ ಬಾಲ್ಯದಿಂದಲೂ ಅದೆಸ್ಟೋ Unexpected ಗಳನ್ನು ಎದುರಿಸುತ್ತ ಬಂದಿರುತ್ತಾನೆ, ಜೀವನ ಅಂದರೆ ಹಾಗೆ.. ಆ ಎಲ್ಲ Unexpected ಗಳನ್ನು ಎಷ್ಟು ಸಮರ್ಥವಾಗಿ ಎದುರಿಸುತ್ತೀವಿ ಅನ್ನೋದರಮೇಲೆ ಜೀವನದ ಸಾರ್ಥಕತೆ ನಿರ್ಧಾರವಾಗಿರುತ್ತದೆ.. ಒಬ್ಬ ಕ್ರೀಡಾಪಟು ಒಂದು ಮುಖ್ಯ ಪಂದ್ಯಕ್ಕಾಗಿ ಪ್ರತಿ ನಿತ್ಯ, ತಿಂಗಳುಗಳ ಕಾಲ ಅಭ್ಯಾಸ ನಡೆಸಿ, ಪಂದ್ಯ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅಫ಼ಘಾತ ಸಂಭವಿಸಿ ಪಂದ್ಯದಲ್ಲಿ ಬಾಗವಹಿಸಲು ಅಸಾದ್ಯವಾದರೆ ಆ ಕ್ರೀಡಾಪಟುವಿನ ಮನಸ್ತಿತಿ ಯನ್ನು ಸ್ವಲ್ಪ ಹೊತ್ತು ಊಹಿಸಿ ನೋಡಿ... ಒಬ್ಬ ತಾಯಿ ೯ ತಿಂಗಳು ತನ್ನ ಗರ್ಬದಲ್ಲಿ ಮಗುವನ್ನು ಹೊತ್ತು, ಮನಸ್ಸಿನಲ್ಲಿ ಭವಿಷ್ಯದ ಕನಸು ಕಾಣುತ್ತಿರುವ ಸಂದರ್ಬದಲ್ಲಿ ಮಗು ಕಣ್ಣು ತೆರೆಯದೇ ಅಸುನೀಗಿದರೆ ಆ ತಾಯಿಯ ಮನಸ್ತಿತಿ ಹೇಗಿರಬಹುದು..? ಪ್ರಾಣಕ್ಕೆ ಪ್ರಾಣ ನೀಡಲು ಸಿದ್ದವಿರುವಸ್ಟು ಪ್ರೀತಿಸಿ, ಪರಸ್ಪರರ ಮನಸ್ಸಿನಲ್ಲಿ ಕನಸಿನ ಗೋಪುರ ಕಟ್ಟಿ ಕೊನೆಯಲ್ಲಿ ಯಾವುದೊ ಒತ್ತಡಕ್ಕೆ ಮಣಿದು, ಇನ್ಯಾವುದೋ ಕಾರಣ ನೀಡಿ ಸಂಗಾತಿಯನ್ನು ತೊರೆದು ಹೋದಾಗ ಅದೇ ಸಂಗಾತಿ ನೆನಪಿನಲ್ಲಿ ಕಾಲಕಳೆಯುತ್ತಿರುವವನ/ಳ ಮನಸ್ತಿತಿಯನ್ನು ಊಹಿಸಲು ಸಾದ್ಯವೇ..? ಹೀಗೆ ಅದೆಸ್ಟೋ ಊಹಿಸಲು ಸಾಧ್ಯವಾಗದೆ ಇರುವಂತಹ Unexpected ಗಳು ಎದುರಾದಾಗ ಪ್ರತಿಯೊಬ್ಬ ಕೂಡ ಒಂದು ಕ್ಷಣ ವಿಚಿಲಿತನಾಗುವುದು ಸಾಮಾನ್ಯ.. ಸೋಲು, ನಿರಾಸೆ, ಹತಾಶೆ, ದುಃಖ ಇವೆಲ್ಲ ಜೀವನದ ಕೆಲವು ಅಧ್ಯಾಯಗಳು ಅಸ್ಟೆ..

ಪ್ರತಿನಿತ್ಯ ಪತ್ರಿಕೆಗಳಲ್ಲಿ, ಟೀವಿ ಮಾಧ್ಯಮಗಳಲ್ಲಿ ಅದೆಸ್ಟೋ ಆತ್ಮಹತ್ಯಾ ಪ್ರಕರಣಗಳು, ಕೊಲೆ, ಅತ್ಯಾಚಾರ, ಆಸಿಡ್ ದಾಳಿ ಪ್ರಕರಣಗಳು ವರದಿ ಆಗ್ತಾನೆ ಇರತ್ತೆ, ಇದಕ್ಕೆಲ್ಲ ಕಾರಣಗಳು ಅಥವಾ Motive ಅಂತೀವಲ್ಲ ಅದು ಏನೇ ಇರಬಹುದು, ಆದರೆ ಈ ಎಲ್ಲ ಪ್ರಕರಣಗಳು ಸಂಭವಿಸೋದು ಮನುಷ್ಯ ತಾಳ್ಮೆ ಕಳೆದುಕೊಂಡಾಗ, ಅದೇ ಮನುಷ್ಯ Time ಕೊಟ್ಟು ನೋಡೋಣ, ಸ್ವಲ್ಪ ಕಾದು ನೋಡೋಣ ಎಂಬ ಚಿಂತನೆ ಮಾಡಿದ್ದರೆ ಖಂಡಿತ ಇಂತಹ ಅದೆಸ್ಟೋ ಘಟನೆಗಳು ಸಂಭವಿಸುತ್ತಾನೆ ಇರಲಿಲ್ಲ ಅಲ್ವಾ? ಇದನ್ನೆಲ್ಲಾ ಬರೆಯೋದು, ಸಲಹೆ ಕೊಡೋದು ತುಂಬಾನೇ ಸರಳ ಆದರೆ ಆ ಕಾಯೋ ಸಮಯ, ತಾಳ್ಮೆಯಿಂದ ಇರಬೇಕಾದ ಸಮಯ ಇದೆಯಲ್ಲ ಅದು ಮನುಷ್ಯನ ನಿಜವಾದ ಅಘ್ನಿಪರೀಕ್ಷೆ...

ಮನಸ್ಸು ಅತ್ಯಂತ ಚಂಚಲ ಸ್ನೇಹಿತರೆ, ಕೆಟ್ಟದ್ದನ್ನೇ ಹೆಚ್ಚಾಗಿ ಯೋಚನೆ ಮಾಡ್ತಾ ಇರತ್ತೆ, ಆ ಒಂದು ಕ್ಷಣದಲ್ಲಿ ಏನಾದರೂ ಒಂದು ನಿರ್ಧಾರಕ್ಕೆ ಬಂದುಬಿಡಬೇಕು, ತನಗೆ ಆದ ಮೋಸ ಆಗಿರಬಹುದು, ನೋವಾಗಿರಬಹುದು ಅದಕ್ಕೆ ಪ್ರತಿಯಾಗಿ ದ್ವೇಷ ಸಾಧಿಸಲೇಬೇಕು ಅನ್ನೋ ನಿರ್ಧಾರಕ್ಕೆ ಮನಸ್ಸು ಮನುಷ್ಯನನ್ನು ಪ್ರೇರೇಪಿಸುತ್ತಾನೆ ಇರತ್ತೆ... ಆದರೆ ಆ ಮನಸ್ಸನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವಂತ ಸಾಮರ್ತ್ಯವನ್ನು ಪ್ರತಿಯೊಬ್ಬ ಕೂಡ ಬೆಳೆಸಿಕೊಳ್ಳಲೆಬೇಕು... ಇದು ನಾನು ನನ್ನ ಸ್ವಂತ ಅನುಭವದಿಂದ ಕೋಪ ಕಡಿಮೆ ಮಾಡಿಕೊಳ್ಳೋಕೆ ಕಂಡುಕೊಂಡ ಮಾರ್ಗ, ನನಗೆ ತುಂಬಾ ಕೋಪ ಬಂದ್ರೆ, ನಾನು ಹೇಳ್ಬೇಕು ಅಂತಿರೋ ವಿಷಯವನ್ನು ನನ್ನ mobile ನಲ್ಲೋ, ಇಲ್ಲ laptop ನಲ್ಲೋ ಟೈಪ್ ಮಾಡ್ಕೊತ ಇರ್ತೀನಿ, type ಮಾಡಿ ಹಾಗೆ ಇಟ್ಕೋತಿನಿ, ಖಂಡಿತಾ ಯಾರಿಗೂ send ಮಾಡಲ್ಲ.. ಒಂದೆರಡು ಸಲ ಓದ್ಕೋತಾ ಇದ್ರೆ ಕೋಪ ನಿಧಾನವಾಗಿ ತನ್ನಿಂದತಾನೇ  ಕಡಿಮೆ ಆಗ್ತಾ ಬರತ್ತೆ, send ಮಾಡೋ ಪರಿಸ್ತಿತಿನೂ ಬರಲ್ಲ.. ಈ Technique ಬೇಕಾದ್ರೆ ನೀವು ಟ್ರೈ ಮಾಡಿ..

ಪ್ರಪಂಚ ತುಂಬಾ ವಿಶಾಲವಾಗಿದೆ ಸ್ನೇಹಿತರೆ, ನಮ್ಮ ಕಲ್ಪನೆಗೂ ಮೀರಿದ ಅದೆಸ್ಟೋ ಅದ್ಬುತಗಳು ನಮ್ಮ ಪ್ರಪಂಚದಲ್ಲಿದೆ, ಹೊಸ ಊರುಗಳಿಗೆ ಭೇಟಿ ನೀಡಿ, ಹೊಸ ಜನರನ್ನು ಭೇಟಿಮಾಡಿ, ಹೊಸ ಸಂಸ್ಕೃತಿಯ ಬಗ್ಗೆ ಅಧ್ಯಯನ ನಡೆಸಿ, ಸಮಾಜ ಸೇವೆಯಲ್ಲಿ ಭಾಗವಹಿಸಿ, ಅದೆಸ್ಟೋ ಅನಾಥಶ್ರಮಗಳಿವೆ, ವೃದ್ದಾಶ್ರಮಗಳಿವೆ ನಿಮ್ಮ ಕೈಲಾದ ಸಹಾಯ ಮಾಡಿ, ನಿಮ್ಮನ್ನು ಸಂಪೂರ್ಣವಾಗಿ ಯಾವುದಾದರೊಂದು ಕೆಲಸದಲ್ಲಿ ತೊಡಗಿಸಿಕೊಳ್ಳಿ... ಮನಸ್ಸಿನ ನೋವು ಎಸ್ಟೇ ಕಷ್ಟದ್ದಾಗಿದ್ದರೂ ಕೂಡ ಖಂಡಿತ ನೀವು ಆ ನೋವಿನಿಂದ ಹೊರಬರುತ್ತೀರಿ.

ನಮ್ಮನ್ನು ಮೊದಲು ನಾವು ಪ್ರೀತಿಸುವುದನ್ನು ರೂಢಿಸಿಕೊಳ್ಳಬೇಕು, ನಂತರ ಇನ್ನೊಬ್ಬರ ಪ್ರೀತಿಯನ್ನು ಬಯಸುವುದು ಒಳ್ಳೆಯದು ಅಲ್ಲವೇ, ನೋವಿನಿಂದ ಹೊರಬರಬೇಕೋ ಅಥವಾ  ಅದೇ ನೋವಿನಲ್ಲೇ  ಕೊರಗುತ್ತಾ ಇರಬೇಕೋ ಅನ್ನೋದನ್ನ ನಿರ್ಧಾರ ಮಾಡಬೇಕಾದವರು ನಾವೆ ತಾನೇ.. ನಮ್ಮ ಸ್ನೇಹಿತರು, ಬಂಧುಗಳು, ಆತ್ಮೀಯರು ಕೇವಲ ಧೈರ್ಯ ನೀಡಿ, ಸಮಾಧಾನದ ಮಾತುಗಳನ್ನಾಡಬಹುದೇ ಹೊರತು ಸದಾಕಾಲ ನಮ್ಮ ನೋವಿನೊಂದಿಗೆ ಕೊರಗುತ್ತಾ ಇರಲು ಸಾದ್ಯವಾದೀತೇ..

Timeಗೆ ಅಸಾಧ್ಯ ಅನ್ನೋದು ಯಾವುದೂ ಇಲ್ಲ, ನೀವೇ ವಿಚಾರ ಮಾಡಿ, ನಮಗೆ ಅತ್ಯಂತ ಆತ್ಮೀಯರಾದವರು ತೀರಿಹೋದಾಗ ಪ್ರತಿಯೊಬ್ಬ ಮನುಷ್ಯ ಕೂಡ ದುಃಖ ಪಟ್ಟುಕೊಳ್ಳುವುದು ಸಹಜ, ಆದರೆ ಈ ದುಃಖ ಕಾಲಕಳೆದಂತೆ ಕಡಿಮೆಆಗುತ್ತಾ ಹೋಗಿ ಒಂದು ವಾರ ಇಲ್ಲವೇ, ಒಂದು ತಿಂಗಳಿನಲ್ಲಿ ಮನುಷ್ಯ ಸಹಜ ಜೀವನಕ್ಕೆ ಹೊಂದಿಕೊಳ್ಳುತ್ತಾನಲ್ಲ ಹಾಗೆಯೇ ಪ್ರತಿಯೊಂದು ಕೂಡ ಕಾಲಕಳೆದಂತೆ ಸಹಜ ಸ್ತಿತಿಗೆ ಬಂದೇ ಬರುತ್ತದೆ..

ಗಾಂದಿಜಿ ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆಮನೆಗೆ ಸೇರಿದಾಗ ಹಾಗೂ ಬ್ರಿಟಿಷರಿಂದ ಏಟು ತಿಂದು ಖಿನ್ನನಾಗಿ ತಮ್ಮ ಪ್ರಯತ್ನ ಕೈ ಬಿಟ್ಟಿದ್ದರೆ ಮೋಹನದಾಸ್ ಕರಮಚಂದ್ ಗಾಂಧೀ 'ಮಹಾತ್ಮಾ ಗಾಂಧೀಜಿ' ಆಗ್ತಾ ಇರಲಿಲ್ಲ... ಬಾಹ್ಯ ಪ್ರಪಂಚದ ಸಂಪರ್ಕವೇ ಇಲ್ಲದೆ, ಬೆಳಕು, ಗಾಳಿ ಸ್ಪರ್ಷ್ಯವಿಲ್ಲದೆ ತನ್ನ ದೇಹಕ್ಕಿಂತ ಕಿರಿದಾದ ಸೆರೆಮನೆಯ ಕೋಣೆಯಲ್ಲಿ ೧೮ ವರ್ಷಗಳ ಕಾಲ ಕಳೆದ ಮನುಷ್ಯ ತನ್ನ ಜೀವನದ ಬಗ್ಗೆ ಹತಾಶ ಭಾವನೆ ತೆಳೆದಿದ್ದರೆ ದಕ್ಷಿಣ ಆಫ್ರಿಕಾ ದೇಶದ ಅಧ್ಯಕ್ಷನಾಗುತ್ತಾ ಇರಲಿಲ್ಲ ಅಲ್ವ ಸ್ನೇಹಿತರೆ... ಸೋಲಿಲ್ಲದ ಗೆಲುವು ಇರೋದಿಕ್ಕೆ ಸಾಧ್ಯವೇ ಇಲ್ಲ ಅಲ್ವಾ.. ಅಸಾಧ್ಯವನ್ನು ಸಾಧಿಸಿದ ಅದೆಸ್ಟೋ ಮಹಾತ್ಮರು ತಮ್ಮ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸೋಲನ್ನು ನೋಡಿರುತ್ತಾರೆ...

So Time Heals Everything and Life Goes On ಜೀವನದಲ್ಲಿ ಎಂತಹುದೇ ಕಷ್ಟಗಳು ಬರಲಿ, Unexpectedಗಳು ಎದುರಾಗಲಿ, ಧೈರ್ಯಕಳೆದುಕೊಳ್ಳಬೇಡಿ, ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ, ಸಮಯ ಕಳೀತಾ ಕಳೀತಾ ಎಲ್ಲ ಸಹಜ ಸ್ತಿತಿಗೆ ಬಂದೇ ಬರತ್ತೆ... ಧಟ್ಟ ಮೋಡ ಕವಿದ ಆಕಾಶ ಮಳೆಯಾದಮೇಲೆ ತನ್ನ ಸ್ವಚ್ಛ ನೀಲಿ ಬಣ್ಣಕ್ಕೆ ಹಿಂದುರುಗಲೇ ಬೇಕು, ಹಾಗೇ ರಾತ್ರಿ ಕಳೆದರೆ ಮಾತ್ರ ಅಲ್ವೇ ಹಗಲು ಬರೋದು...???

ಶುಭವಾಗಲಿ
-ಪಚ್ಚಿ.