Monday, 11 August 2014

ಹೀಗೊಂದು Second hand Love story...!

"Dude.. It's been just 6 months right, Just forget her and move on.. ಅಲ್ಲ ಕಣೋ ನಿನ್ನ ಪುಣ್ಯಕ್ಕೆ ಈಗಲೇ ಎಲ್ಲ ಗೊತ್ತಾಯ್ತು, ಒಂದುವೇಳೆ ನೀನು ಮನೆಯಲ್ಲಿ ಈ ವಿಚಾರ Discuss ಮಾಡಿ, ಮದುವೆ Arrange ಆಗೋ ಟೈಮ್ ಅಲ್ಲಿ ಹೀಗೆ ಆಗಿದ್ರೆ ಏನೋ ಕತೆ, ಆಗೋದೆಲ್ಲ ಒಳ್ಳೆಯದಿಕ್ಕೆ ಕಣೋ, Come on, Cheer up" ಅಂತ ಒಬ್ಬ ಸ್ನೇಹಿತ ಸಮಾಧಾನ ಮಾಡೋಕೆ ಪ್ರಯತ್ನ ಪಡ್ತಾ ಇದ್ದ.. ಜಾಸ್ತಿ ಅಳೋಕೆ ನಾಚಿಕೆ, ಪೂರ್ತಿಯಾಗಿ ಒಂದು ಸಲ ಅಳದೇ ಮಾತಾಡೋಕೇ ಆಗಲ್ಲ ಅನ್ನೋ ಸ್ತಿತಿಯಲ್ಲಿ ಅವನ ಗೆಳೆಯ, "ಹೂಂ ಕಣೋ.. ನಿಜ, ಎಲ್ಲ ಈಗಲೇ ಗೊತ್ತಾಯ್ತು, ಸರಿ ಆಗ್ತೀನಿ ಬಿಡು.. It's Okay" ಅಂತ ತನ್ನಷ್ಟಕ್ಕೆ ತಾನೇ ಅಂದುಕೊಳ್ಳುತ್ತಾ ಆಕಾಶದತ್ತ ಮುಖ ಮಾಡಿದವನ ಕಣ್ಣಾಲಿಗಳು ತೇವಗೊಂಡಿದ್ದವು, ದುಖ ಉಮ್ಮಳಿಸಿ ಬರುತ್ತಿತ್ತು..

Drinks, Drugs, Smoke etc. etc. etc. ಯಾವುದೇ ತರಹದ ಅಭ್ಯಾಸ ಇಲ್ಲದ ಆರೋಗ್ಯವಂತ, ತನ್ನ First 'LOVE failure' ಆದಾಗ ಆ ದುಃಖ ಮರಿಯೋಕೆ ಆಯ್ದುಕೊಂಡದ್ದು ಅದೆಲ್ಲಕ್ಕಿಂತ ಅಪಾಯಕಾರಿಯಾದ ಒಂದು ಪರಿಹಾರವನ್ನು...! Yes.. Immediately He Fell In Love Again...!!! 'ರವಿಂದ್ರ ಸಿಂಗ್' ಎಂಬ ಲೇಖಕ 'I Too Had Love Story' ಅನ್ನೋ ದುರಂತ ಪ್ರೇಮ ಕಥೆಯನ್ನಾದರಿಸಿ ಬರೆದ ಒಂದು ಕಾದಂಬರಿಯನ್ನು ಅವನ ಮೊದಲ ಗೆಳತಿ ತನ್ನ ಇನಿಯನಿಗೆ ಅವಳ ವಿರಹ ವೇದನೆಯನ್ನು ಮನವರಿಕೆ ಮಾಡೋ ಉದ್ದೇಶದಿಂದ ಓದೋಕೆ Suggest ಮಾಡಿದ್ಲು ಅನ್ಸತ್ತೆ.. ಆದರೆ ಈ ಮನುಷ್ಯ ಆ ಕಾದಂಬರಿ ಓದಿದ್ದು ಮಾತ್ರ ಆ ಪ್ರೀತಿಯ ಮುಗ್ದ ಗೆಳತಿ ದೂರ ಆದಮೇಲೆ... ಓದಿದ ಕಥೆಯಲ್ಲಿ ಬರೋ ಕೆಲವು ಸನ್ನಿವೇಶಗಳಲ್ಲಿ ತನ್ನ ಕಥೆಯನ್ನು ಕಲ್ಪಿಸಿಕೊಂಡು ತನ್ನ ಪ್ರೇಯಸಿಯನ್ನು Miss ಮಾಡ್ಕೋತಾ ಇರೋವಾಗ, ಅದೇ 'ರವಿಂದ್ರ ಸಿಂಗ್' ಬರೆದ ಇನ್ನೊಂದು ಕಾದಂಬರಿ - 'Can Love Happen Twice?' ಅನ್ನೋ Tittleಗೇ Impress ಆಗಿ ಆ ಕಾದಂಬರಿ ಓದದೇ ತನ್ನಷ್ಟಕ್ಕೇ ಮನಸಲ್ಲಿ YES, it can happen ಅನ್ನೋ ಮೂರ್ಖ ನಿರ್ಧಾರಕ್ಕೆ ಅದಾಗಲೇ ಅವನು ಬಂದು ಆಗಿತ್ತು..

ನೀರಲ್ಲಿ ಮುಳುಗಿ ಸಾಯುವವನಿಗೆ ಹುಲ್ಲುಕಡ್ಡಿ ಆಸರೆ ಅಂತಾರಲ್ಲ, ಹಾಗಿತ್ತು ಅವನ ಸ್ತಿತಿ.. ಆ ಹುಲ್ಲುಕಡ್ದಿಯಾಗಿ ಆಸರೆಯಾಗೋ ಬರವಸೆಯನ್ನು ನೀಡಿದವಳು ಆತನ ಸಹುದ್ಯೋಗಿ. First Love Is True Love. When it breaks, Rest all will become Medicine for the First ಅಂತಾರಲ್ಲಾ, ಆದರೆ ಈತನ ದುರಾದೃಷ್ಟಕ್ಕೆ He Consumed Expired Medicine..!!! ಆಕೆಯೋ, ಅದಾಗಲೇ ಪ್ರೀತಿಯೆಂಬ ಸಾಗರದಲ್ಲಿ ಈತನಿಗಿಂತ ಆಳಕ್ಕೆ ಇಳಿದು ಮೋಸಕ್ಕೆ ಒಳಗಾದವಳು, ಅದು ಒಂದು ರೀತಿಯಲ್ಲಿ  ಸಮಾನ ಮನಸ್ಕರ ಸಮಾಗಮ ಎನ್ನಬಹುದು..!!! ಹಾಗಾಗಿ ಸ್ನೇಹ ಪ್ರೀತಿಯಾಗಿ ಕವಲೊಡೆಯಲು ಹೆಚ್ಚು ಸಮಯ ಹಿಡಿಯಲಿಲ್ಲ ಹಾಗೆಯೇ ಆ ಪ್ರೀತಿಯ ಸಂಬಂಧ ಕೊನೆಯಾಗಲೂ ಕೂಡ ಹೆಚ್ಚು ಸಮಯಹಿಡಿಯದೇ ಇದ್ದದ್ದು ದುರಂತ.

ಪ್ರೀತಿ 60 ವರ್ಷದ್ದಾಗಿರಲಿ, 6 ವರ್ಷದ್ದಾಗಿರಲಿ, 6 ತಿಂಗಳದ್ದಾಗಿರಲಿ ಪ್ರೀತಿ ಪ್ರೀತಿನೇ ಅಲ್ವ್ವೆ? ಮನುಷ್ಯನಿಗೆ ಒಂದು ವಸ್ತುವಿನ ಪ್ರಾಮುಖ್ಯತೆ ಗೊತ್ತಾಗೋದು ಆತ ಅದನ್ನು ಕಳೆದುಕೊಂದಾಗಲೇ ಅನ್ನೋದು ರೂಡಿಯಲ್ಲಿ ಬಂದಮಾತು, ಹಾಗೆಯೇ ಕಳೆದವಸ್ತು ಪುನಃ ಸಿಗದೇ ಇದ್ದರೂ, ಸಾಮಾನ್ಯವಾಗಿ ಆ ವಸ್ತುವನ್ನು ಹೋಲುವ ಇನ್ನೊಂದು ವಸ್ತು ಸಿಕ್ಕಾಗ ಅದನ್ನು ಇನ್ನಸ್ಷ್ಟು ಜೋಪಾನಮಾಡುವುದು ಮನುಷ್ಯನ ಸಹಜಧರ್ಮ. ಆದರೆ ಇವರಿಬ್ಬರ ವಿಷಯದಲ್ಲಿ ಆ ಮನೋಭಾವ ಇದ್ದದ್ದು ಆತನಿಗೆ ಮಾತ್ರ. He was very serious about his second Love.

ಆ ಹುಡುಗಿ, ಈತನನ್ನು Convince ಮಾಡಲು ಮಾಡಿದ ಪ್ರಯತ್ನ, ಆಕೆ ತೋರಿಸಿದ ಪ್ರೀತಿ, ಕಾಳಜಿ, ನೀಡಿದ ಭರವಸೆಗಳು, ಅತೀ ಎನ್ನಿಸುವಷ್ಟು ಇದ್ದ ಇಬ್ಬರ ನಡುವಿನ ಹೊಂದಾಣಿಕೆ ಎಲ್ಲವೂ ಆತನಲ್ಲಿ ಆಕೆಯಬಗ್ಗೆ Second thought ಗೆ ಅವಕಾಶ ನೀಡಲಿಲ್ಲ. ಆದರೆ ಆ ಹುಡುಗಿಗೆ  ಈತನ ಸ್ನೇಹ, ಪ್ರೀತಿ, ಸಾಮಿಪ್ಯ, ಸಾನಿದ್ಯ ಎಲ್ಲವೂ ಕೇವಲ ಆಕೆ ಅದಾಗಲೇ  ಕಡಿದುಕೊಂಡು ಬಂದ ಅಸಹ್ಯ Relationship ನ ಕೆಟ್ಟ ನೆನಪುಗಳ ನೋವುಗಳನ್ನು ವಾಸಿಮಾಡೊ 'Pain Killer' ಮಾತ್ರೆಯಾಗಿತ್ತು ಅಷ್ಟೆ.

ಒಂದು ಕ್ಷಣ ಕೂಡಾ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಆತ್ಮೀಯತೆ, ಪ್ರತೀನಿತ್ಯ ಆಕೆಯ ಜೊತೆಯಲ್ಲೇ ಕೆಲಸಮಾಡಿ, ಆಕೆಯನ್ನು ಅವಳ ಮನೆಯ ಹತ್ತಿರದವರೆಗೂ ಕೈ ಹಿಡಿದುಕೊಂಡು ಹೋಗಿ ಬಿಟ್ಟು ಬಂದರೂ, ಈತ ಮನೆ ತಲುಪುವಷ್ಟರಲ್ಲಿ 'I Miss You ಕಣೋ' ಅನ್ನೋ ಸಂದೇಶ ಅದಾಗಲೇ ಈತನ ಮೊಬೈಲ್ ನ WhatsApp ಅಪ್ಲಿಕೇಶನ್ ಅಲ್ಲಿ ರವಾನೆಯಾಗಿರುತ್ತಿತ್ತು. ಅವರ ದಿನಚರಿ ಪ್ರಾರಂಭವಾಗುವುದೇ ಇಬ್ಬರ ನಡುವಿನ ಶುಭೋದಯದ ಸಂದೇಶದೊಂದಿಗೆ, ನಿದ್ರಿಸುವ ಸಮಯವನ್ನೊಂದನ್ನು ಹೊರತುಪಡಿಸಿ ಪ್ರತಿ ಕ್ಷಣವೂ ಇಬ್ಬರ ನಡುವೆ Message, Calls ಎಡೆಬಿಡದೆ ವಿನಿಮಯವಾಗುತ್ತಿದ್ದಂತಹ Modern ಪ್ರೀತಿ ಅದು.

ಅದಾಗಲೇ ಕಳೆದುಕೊಂಡ ಪವಿತ್ರ ಪ್ರೀತಿಯ ನೋವನ್ನು ಸಂಪೂರ್ಣ ಮರೆತು, ಪ್ರೀತಿಗೆ ಹಾಗೂ ಜೀವನಕ್ಕೆ ಹೊಸ ಅರ್ಥ ನೀಡಲು ಹೊರಟಿರುವ ಗೆಳತಿಯ ಬಗ್ಗೆ ಅಪಾರ ಕನಸು, ಆಸೆಗಳನ್ನು ಹೊತ್ತು, ಭವಿಷ್ಯದ ಕನಸು ಕಾಣುತ್ತಿದ್ದವನು ಆ ಒಂದು ಮುಂಜಾನೆಯನ್ನು ಖಂಡಿತಾ ಊಹಿಸಿರಲಿಲ್ಲ ಅನ್ಸತ್ತೆ. ಅದು ಮೇ 3, 2014 ಎಂದಿನಂತೆ ಆ ಮುಂಜಾನೆ 'Good Morning ಪಾಪು' ಎಂಬ ಸಂದೇಶ ಕಳುಹಿಸಿದವನಿಗೆ ದೊರಕಿದ Reply ಒಂದುಕ್ಷಣ ಆತನನ್ನು ದಿಘ್ಬ್ರಾಂತಗೊಳಿಸಿತ್ತು, ಜೀವನದಲ್ಲಿ ಎರಡನೇ ಬಾರಿಗೆ ಪ್ರೀತಿಯನ್ನು ಕಳೆದುಕೊಂಡು ಖಿನ್ನನಾಗಿ ಕುಸಿದು ಕೂತಿದ್ದ. ಆ ಹುಡುಗಿ, 'ಪ್ಲೀಸ್ ಕಣೋ, ಪಾಪು ಅಂತ ಕರೀಬೇಡ ನನ್ನ, Let 's Breakup ಅಂತ Reply ಮಾಡಿದ್ಲು. ಆಕೆಯಿಂದ ನಿರೀಕ್ಷಿಸಿರದ ಆ ನಿರ್ಧಾರಕ್ಕೆ ಕಡೇಪಕ್ಷ ಕಾರಣವನ್ನಾದರೂ ತಿಳಿದುಕೊಳ್ಳಬೇಕೆಂದು ಹತಾಶನಾಗಿ, ತೀವ್ರ ದುಖಿತನಾಗಿ ಆಕೆಗೆ Message ಮಾಡ್ತಾ ಇದ್ದ, call ಮಾಡ್ತಾ ಇದ್ದ ಆದರೆ ಯಾವುದಕ್ಕೂ ಪ್ರತ್ಯುತ್ತರ ಮಾತ್ರ ಬರ್ತಾನೆ ಇರಲಿಲ್ಲ. ಹಾಗಂತ ಆಕೆ ತನ್ನ mobile ನೋಡ್ತಾ ಇರಲಿಲ್ಲ ಅಂತೇನು ಅರ್ಥ ಅಲ್ಲ, ಯಾಕೆಂದರೆ ಆಕೆ WhatsApp ನಲ್ಲಿ Online ಇದ್ಲು.

ಒಂದೆರಡು ದಿನ ಕಳೆದರೂ, ಈತ ಪ್ರತಿನಿತ್ಯ, ಪ್ರತಿ ಕ್ಷಣ ಆಕೆ ಬದಲಾಗಬಹುದೇನೋ ಎಂಬ ನಿರೀಕ್ಷೆಯಲ್ಲೇ ಆಕೆಗೆ Message ಮಾಡ್ತಾನೆ ಇದ್ದ, ಕೊನೆಗೂ ಆ ಹುಡುಗಿ Bangalore ಹುಡುಗಿಯರ 'Patented Statement' ಒಂದನ್ನು ಹೇಳಿ ತನ್ನ ಪ್ರೀತಿಯ ನಾಟಕಕ್ಕೆ ಪೂರ್ಣವಿರಾಮವಿಟ್ಟಿದ್ದಳು. 'Sorry ಕಣೋ, I Know, I hurt you ಆದರೆ ಮನೆಯಲ್ಲಿ ಅಪ್ಪ ಅಮ್ಮ ಖಂಡಿತಾ ಒಪ್ಪಲ್ಲ, ಅದಾಗಲೇ ಹುಡುಗನನ್ನು ಹುಡುಕೋಕೆ ಪ್ರಾರಂಭಿಸಿದ್ದಾರೆ, ನನ್ನ ಈ ನಿರ್ಧಾರದಿಂದ ನಿನಗೆ ನೋವಾಗಿದೆ, ಆದರೆ ಇದೆಲ್ಲ ನಮ್ಮ ಒಳ್ಳೆಯದಿಕ್ಕೆ ಕಣೋ, ನೀನು ಚೆನ್ನಾಗಿರು, ಎಲ್ಲ ಒಳ್ಳೇದಾಗತ್ತೆ, Bye ಕಣೋ..' ಎನ್ನೋ ಒಂದು Statement' ನಿಂದ, ತಾನು ಆತನ ಜೊತೆಯಾಗಿ, ಅವನ ಹೃದಯದಲ್ಲಿ ನಿರ್ಮಿಸಿದ ಆತನ ಪ್ರೀತಿಯ ಸೌಧವನ್ನು ತನ್ನ ಎಡಗಾಲಿನಿಂದ ಒದ್ದು ಕೆಡವಿದ್ದಳು. ಆದರೆ ವಾಸ್ತವದಲ್ಲಿ, ಆಕೆ ಅದಾಗಲೇ ತನ್ನ ಹಳೆಯ Boyfriend ನ Facebook ಅಕೌಂಟ್ ನಲ್ಲಿ ಪುನಃ ಸ್ಥಾನ ಪಡೆದಿದ್ದಳು, ಆತನ ಎಲ್ಲ update ಗಳಿಗೂ ಈಕೆಯ Like ಗಳು, ಈಕೆಯ updates ಗಳಿಗೆ ಆತನ Like ಗಳು…!!!

ಆಕೆ ಅವಳ ಹಳೆಯ ನೋವಿನ ಕಥೆಯನ್ನು ಹೇಳಿಕೊಂಡು ಅತ್ತಾಗಲೆಲ್ಲ ಆಕೆಯನ್ನು ಪ್ರೀತಿಯಿಂದ ಆಲಿಂಗಿಸಿ ಆಕೆಯ ಕಣ್ಣೀರನ್ನು ಒರೆಸಿ, ಆಕೆಗೆ ಆಕೆಯ ಜೀವನದಮೇಲೆ ಪ್ರೀತಿಯನ್ನು, ಹೊಸ ಭರವಸೆಯನ್ನೂ ಕರುಣಿಸಿದವನ ನಿಷ್ಕಲ್ಮಶ ಪ್ರೀತಿಗೆ ಆಕೆ ನೀಡಿದ ಉಡುಗೊರೆಯ ಭಾರ ಹೊರುವಲ್ಲಿ ಆತ ಸಂಪೂರ್ಣ ನಿಷ್ಯಕ್ತನಾಗಿದ್ದ...

ತನ್ನ ವಿಫಲ ಪ್ರೇಮದಿಂದ ಕಂಗೆಟ್ಟು, ತನಗಾದ ದ್ರೋಹವನ್ನು ನೆನೆದು ಪ್ರತೀ ಕ್ಷಣ ಆತ ಬಿಕ್ಕಳಿಸುವಂತಾಗಿದೆ..

ಹೌದಲ್ಲವಾ? ತಮ್ಮ ಕ್ಷಣಿಕದ ನೋವನ್ನು ಮರೆಯೋ ಉದ್ದೇಶದಿಂದ, ಸ್ನೇಹಿತನೊಬ್ಬನ ಪರಿಸ್ತಿತಿಯನ್ನು ಪ್ರೀತಿಯ ಹೆಸರಲ್ಲಿ ಉಪಯೋಗಿಸಿಕೊಂಡ ಆ ಹುಡುಗಿಯರ ಹಾಗೆಯೇ ನಮ್ಮ ಸಮಾಜದಲ್ಲಿ ಅದೆಷ್ಟೋ ಹುಡುಗ, ಹುಡುಗಿಯರು ಪ್ರೀತಿ ಎಂಬ ಮಧುರ ಭಾಂಧವ್ಯವನ್ನು ಹಾಳುಗೆಡವಿ ಪ್ರೀತಿಯ ಅರ್ಥವನ್ನೇ ಕೆಡಿಸುತ್ತಿದ್ದಾರೆ ಅಲ್ವಾ?
ಅಂತಹ ಪ್ರೀತಿಯ ಕಪಟ ನಾಟಕವಾಡುವವರಿಗೆ ನನ್ನದೊಂದು ಧಿಕ್ಕಾರವಿರಲಿ.

ನಿಮ್ಮವ,
ಪಚ್ಚಿ